ಬೆಂಗಳೂರು: ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯ ಕಣ್ಣಿನ ಪೂರೆ ಮತ್ತು ಗ್ಲುಕೋಮಾ ಸೇವೆಗಳ ಹಿರಿಯ ಸಲಹೆಗಾರ್ಥಿ ಡಾ. ಸೂಸನ್ ಜಾಕೋಬ್ ಕಣ್ಣಿನ ಪೂರೆ ಮತ್ತು ವಕ್ರೀಭವನ ಶಸ್ತ್ರಚಿಕಿತ್ಸೆ ಮಾಡುವ ಜಾಗತಿಕ 10 ತಜ್ಞರಲ್ಲಿ ಸ್ಥಾನವನ್ನು ಪಡೆದಿದ್ದಾರೆ.
ಡಾ. ಸೂಸನ್ ಜಾಕೋಬ್ ವಕ್ರೀಕಾರ ಶಸ್ತ್ರಚಿಕಿತ್ಸೆ, ಅತ್ಯಾಧುನಿಕ ಕೆರಾಟೋಕೊನಸ್ ನಿರ್ವಹಣೆ, ಸುಧಾರಿತ ಕಾರ್ನಿಯಲ್ ಕಸಿ, ಗ್ಲುಕೋಮಾ ಮತ್ತು ಸಂಕಿರ್ಣ ಕಣ್ಣಿನ ಪೊರೆಗಳಲ್ಲಿ ಪರಿಣಿತಿ ಹೊಂದಿದ್ದಾರೆ. ಇವನ್ನೆಲ್ಲ ಪರಿಗಣಿಸಿ ನೇತ್ರಶಾಸ್ತ್ರದ ಪ್ರಮುಖ ನಿಯತಕಾಲಿಕೆಯಲ್ಲಿ ಒಂದಾದ ಪವರ್ ಲಿಸ್ಟ್ ಮೊದಲ ಸ್ಥಾನವನ್ನು ನೀಡಿದೆ.
ಈ ಕುರಿತು ಮಾತನಾಡಿರುವ ಡಾ. ಅಗರ್ವಾಲ್ಸ್ ಆಸ್ಪತ್ರೆಯ ಅಧ್ಯಕ್ಷ ಪ್ರೊ. ಅಮರ್ ಅಗರ್ವಾಲ್, ಡಾ. ಸೂಸನ್ ಅವರು ವಿಶೇಷವಾಗಿ ಕೆರಾಟೋಕೊನಸ್ ಚಿಕಿತ್ಸೆಯ ನವೀನ ತಂತ್ರವಾದ ಕಾರ್ನಿಯಲ್ ಅಲೋಜೆನಿಕ್ ಇನ್ಟ್ರಾ ಸ್ಟೋಮಲ್ ರಿಂಗ್ ಸೆಗ್ಮಂಟ್ಸ್ ನಲ್ಲಿ ಅಸಂಖ್ಯಾತ ರೋಗಿಗಳಿಗೆ ಪ್ರಯೋಜನ ನೀಡಿದ್ದಾರೆ ಎಂದಿದ್ದಾರೆ.
ಡಾ. ಅಗರ್ವಾಲ್ಸ್ ಆಸ್ಪತ್ರೆಯ ಕಣ್ಣಿನ ಪೂರೆ ಮತ್ತು ಗ್ಲುಕೋಮಾ ಸೇವೆಗಳ ಹಿರಿಯ ಸಲಹೆಗಾರ್ಥಿ ಡಾ. ಸೂಸನ್ ಅವರು ಮಾತನಾಡಿ, ಪವರ್ ಲಿಸ್ಟ್ -2025 ಕಣ್ಣಿನ ಪೂರೆ ಮತ್ತು ವಕ್ರೀಭವನ ಶಸ್ತ್ರ ಚಿಕಿತ್ಸೆಯಲ್ಲಿ ಜಾಗತಿಕ 10 ತಜ್ಞರಲ್ಲಿ ನನ್ನನ್ನು ಗುರುತಿಸಿರುವುದು ಸಂತಸ ತಂದಿದೆ. ಇದು ನನ್ನ ವೈಯಕ್ತಿಕ ಮೈಲಿಗಲ್ಲು ಅಲ್ಲ, ನೇತ್ರವಿಜ್ಞಾನದಲ್ಲಿನ ಸಾಮೂಹಿಕ ಪ್ರಗತಿ ಮತ್ತು ನಮ್ಮ ವೃತ್ತಿಯಲ್ಲಿನ ಅನೇಕರ ಸಮರ್ಪಣೆ ನನ್ನ ಸಾಧನೆಗೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.