News

ಕಾಫಿಪುಡಿಯಲ್ಲಿ ಕಲಬೆರಕೆ: ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್

Share It

ಆಹಾರ ಕಲಬೆರಕೆ ಮಾಡಿ ಮಾರಾಟ ಮಾಡುತ್ತಿದ್ದ ವ್ಯಕ್ತಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ಧ ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಕಾಫಿ ಪುಡಿಯಲ್ಲಿ ಕಲಬೆರಕೆ ವಸ್ತುಗಳನ್ನು ಸೇರಿಸಿ ಮಾರಾಟಾ ಮಾಡುತ್ತಿದ್ದ ಆರೋಪದಡಿ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದು ಕೋರಿ ಹಾಸನ ಜಿಲ್ಲೆ ಸಕಲೇಶಪುರದ ಎಂ.ಎಸ್ ಕಾಫಿ ವರ್ಕ್ಸ್ ಮಾಲಿಕ ಸಯ್ಯದ್ ಅಹ್ಮದ್ ಎಂಬುವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದ್ದು, ಆರೋಪಿಗೆ ವಿಧಿಸಿದ್ದ ಶಿಕ್ಷೆಯನ್ನು ಖಚಿತಪಡಿಸಿದೆ.

ಪ್ರಕರಣದ ಹಿನ್ನೆಲೆ: 2008ರ ಜೂನ್ 20 ರಂದು ಸಕಲೇಶಪುರದ ಆಹಾರ ನಿರೀಕ್ಷಕರು ಸಯ್ಯದ್ ಅಹ್ಮದ್ ಅವರ ಎಂ.ಎಸ್ ಕಾಫಿ ವರ್ಕ್ಸ್ ಗೆ ತೆರಳಿ ಅಲ್ಲಿನ ಕಾಫಿ ಪೌಡರ್ ಪರಿಶೀಲನೆ ಮಾಡಿದ್ದರು. ನಂತರ ಆರು ನೂರು ಗ್ರಾಂನಷ್ಟು ಪುಡಿಯನ್ನು ವೈಜ್ಞಾನಿಕ ಪರೀಕ್ಷೆಗೆ ಕಳುಹಿಸಿದ್ದರು.

ಪರೀಕ್ಷೆ ವೇಳೆ ಕಾಫಿ ಪುಡಿ ಕಲಬೆರಕೆ ಮಾಡಿದ್ದು ಕಂಡು ಬಂದಿತ್ತು. ಅಲ್ಲದೇ ಮಾರಾಟಕ್ಕೆ ಇರಿಸಿದ್ದ ಪ್ಯಾಕೆಟ್ ಗಳ ಮೇಲೆ ಎಷ್ಟು ದಿನಗಳವರೆಗೆ ಬಳಕೆಗೆ ಉತ್ತಮ ಎಂಬುದನ್ನು ಮತ್ತು ಬ್ಯಾಚ್ ಸಂಖ್ಯೆಯನ್ನು ನಮೂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸಯ್ಯದ್ ಅಹ್ಮದ್ ವಿರುದ್ಧ ದೂರು ದಾಖಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ್ದ ಸಕಲೇಶಪುರ ಜೆಎಂಎಫ್ ಸಿ ನ್ಯಾಯಾಲಯ 6 ತಿಂಗಳು ಶಿಕ್ಷೆ ಹಾಗೂ ಒಂದು ಸಾವಿರ ದಂಡ ವಿಧಿಸಿತ್ತು. ಹಾಸನದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವೂ ಶಿಕ್ಷೆ ಸರಿ ಎಂದು ಆದೇಶಿಸಿತ್ತು.

ವಿಚಾರಣಾ ನ್ಯಾಯಾಲಯದ ಈ ಆದೇಶ ಪ್ರಶ್ನಿಸಿ ಸಯ್ಯದ್ ಅಹ್ಮದ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಸಯ್ಯದ್ ಪರ ವಕೀಲರು ವಾದ ಮಂಡಿಸಿ ಕಾಫಿಪುಡಿಯಲ್ಲಿ ಕಲಬೆರಕೆ ಆರೋಪ ಮಾಡಲಾಗಿದೆ. ಆದರೆ, ಕಲಬೆರಕೆ ಅಂಶ ಆರೋಗ್ಯಕ್ಕೆ ಹಾನಿಕರ ಎಂಬುದನ್ನು ಖಚಿತಪಡಿಸಿಲ್ಲ. ಹೀಗಾಗಿ ಶಿಕ್ಷೆ ರದ್ದುಪಡಿಸಬೇಕು ಎಂದು ಕೋರಿದ್ದರು.


Share It

You cannot copy content of this page